ತಂದೆ
ತಂದೆ , ನೀನು ತಂದೆ ನನ್ನ ಬಾಳ ತುಂಬ ಹರುಷ
ಮರೆಯಲಾರೆ ನಿನ್ನ ನಾ ಸಾವಿರಾರು ವರುಷ
ನೊಂದ ಗುರುತು ಬಹಳ ಕಂಡದ್ದು ನಗುವ ಮುಖ
ಎಲ್ಲ ನಮಗೆ ಕೊಟ್ಟು ನೀ ಬಯಸಲಿಲ್ಲ ಸುಖ💞
ನಮಗೆ ಎಲ್ಲ ಕೊಟ್ಟೆ ನೀ ಹರಿದ ಬಟ್ಟೆ ತೊಟ್ಟೆ
ಕಷ್ಟ ನೂರಿದ್ದರು ನಿನ್ನೊಳಗೆ ಹುದುಗಿ ಇಟ್ಟೆ
ಸಂಸಾರ ಸಾಗಿಸಲು ಬಹಳ ಶ್ರಮವಪಟ್ಟೆ
ಆದರೂ ಅದೇಕೋ ದೂರವೇ ಉಳಿದುಬಿಟ್ಟೆ💝
ನನ್ನ ನೋವ ಕಂಡೆ ನಿನ್ನ ಎರಡೂ ಕಣ್ಣಲ್ಲಿ
ನೋವು ನಿನಗೆ ಹೆಚ್ಚು ಬಿದ್ದಾಗ ನಾನು ಮಣ್ಣಲ್ಲಿ
ಆಡ ಬಯಸುವೆ ಆಟ ಮಗುವಾಗಿ ನಿನ್ನೊಂದಿಗೆ
ಮರೆಯಲಾರೆ ನಿನ್ನ , ನಿನ್ನ ನೆನಪೆ ನನಗೆಂದೆಂದಿಗೆ💞
ಭಯದಿ ಅವಿತೆ ನೆನಪು ನಿನ್ನ ಬೆನ್ನಲ್ಲಿ
ಮಗುವಾಗಿ ಆಡುವಾಸೆ ನಿನ್ನ ಬಳಿಯಲ್ಲಿ
ಮಗುವಾಗಿ ಮಲಗುವಾಸೆ ನಿನ್ನ ತೋಳಲ್ಲಿ
ಮಗುವಾಗಿ ನಲಿವ ಆಸೆ ನಿನ್ನ ಜೊತೆಯಲ್ಲಿ💖💖
Tq❤
ReplyDelete